ಪಿ.ನರ್ಸಾ ರೆಡ್ಡಿ (ಜನನ ೨೨ ಸೆಪ್ಟೆಂಬರ್ ೧೯೩೧) ಒಬ್ಬ ಭಾರತೀಯ ಮಾಜಿ ಸ್ವಾತಂತ್ರ್ಯ ಹೋರಾಟಗಾರ ಮತ್ತು ರಾಜಕಾರಣಿ. ಅವರು ಭಾರತದ ೯ ನೇ ಲೋಕಸಭೆಯ ಸಂಸತ್ತಿನ ಸದಸ್ಯರಾಗಿದ್ದರು . ರೆಡ್ಡಿ ಆಂಧ್ರಪ್ರದೇಶದ ಅದಿಲಾಬಾದ್ ಕ್ಷೇತ್ರವನ್ನು ಪ್ರತಿನಿಧಿಸಿದರು ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಎಂಬ ರಾಜಕೀಯ ಪಕ್ಷದ ಸದಸ್ಯರಾಗಿದ್ದರು. == ಆರಂಭಿಕ ಜೀವನ ಮತ್ತು ಶಿಕ್ಷಣ == ಪಿ. ನರ್ಸಾ ರೆಡ್ಡಿ ಅವರು ಆಂಧ್ರಪ್ರದೇಶ ರಾಜ್ಯದ ಅದಿಲಾಬಾದ್ ಜಿಲ್ಲೆಯ ನಿರ್ಮಾಳ್‌ನಲ್ಲಿ ಜನಿಸಿದರು. ಅವರು ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿ, ಬಿಎ ಮತ್ತು ಎಲ್ಎಲ್ ಬಿ ಪದವಿ ಪಡೆದರು. ವೃತ್ತಿಯಲ್ಲಿ, ರೆಡ್ಡಿ ಒಬ್ಬ ಕೃಷಿಕ ಮತ್ತು ವಕೀಲರಾಗಿದ್ದರು. == ರಾಜಕೀಯ ವೃತ್ತಿಜೀವನ == === ಸ್ವಾತಂತ್ರ್ಯ ಪೂರ್ವ === ಪಿ. ನರ್ಸಾ ರೆಡ್ಡಿ ಅವರು ಭಾರತೀಯ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಇವರು ಹೈದರಾಬಾದನ್ನು ನಿಜಾಮರ ಆಳ್ವಿಕೆಯಿಂದ ಮುಕ್ತಗೊಳಿಸುವ ಹೋರಾಟದಲ್ಲಿ ಭಾಗವಹಿಸಿದ್ದರು. === ಸ್ವಾತಂತ್ರ್ಯದ ನಂತರ === ಪಿ. ನರಸಾ ರೆಡ್ಡಿ ಅವರು ೧೯೪೦ ರ ದಶಕದ ಆರಂಭದಿಂದಲೂ ಸಕ್ರಿಯ ರಾಜಕೀಯದಲ್ಲಿದ್ದಾರೆ. ಸಂಸದರಾಗುವ ಮೊದಲು ಅವರು ಮೂರು ನೇರ ಅವಧಿಗೆ ವಿಧಾನಸಭೆಯ (ಭಾರತ) ಸದಸ್ಯರಾಗಿದ್ದರು ಮತ್ತು ಒಂದು ಅವಧಿಗೆ ಆಂಧ್ರ ಪ್ರದೇಶ ವಿಧಾನ ಪರಿಷತ್ತಿನ ಸದಸ್ಯರಾಗಿದ್ದರು. ೧೯೭೧ ರಲ್ಲಿ ಅವರು ಆಂಧ್ರ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿದ್ದರು. == ನಿರ್ವಹಿಸಿದ ಹುದ್ದೆಗಳು == == ಸಹ ನೋಡಿ == ಭಾರತ ಸರ್ಕಾರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಲೋಕಸಭೆ ಭಾರತದ ಸಂಸತ್ತು == ಉಲ್ಲೇಖಗಳು ==